by 1 on | 2025-08-07 10:58:58
Share: Facebook | Twitter | Whatsapp | Linkedin | Visits: 196
ಬದುಕು ಸಿರಿವಂತವೂ ಸುಖಪೂರ್ಣವೂ ಆಗಬೇಕೆಂಬುದು ಎಲ್ಲರ ಇಚ್ಛೆ. ನಾವು ಬದುಕಿರುವವರೆಗೆ ನಮ್ಮ ಬದುಕಿನಲ್ಲಿ ಸಂತಸ
ಸಂತೃಪ್ತಿ ನೆಲೆಸಿರಬೇಕು; ಇಲ್ಲದಿದ್ದರೆ, ನಮ್ಮ ಬದುಕಿಗೆ ಏನರ್ಥ? ಒಂದು ಹೂವಿನ ಮರದಲ್ಲಿ ಅರಳಿದ ಹೂವುಗಳು ದೇವರ ಮುಡಿಗೆ ಏರುತ್ತವೆ. ಮನೆ ಮನೆಯಲ್ಲಿಯೂ ಹೂವುಗಳು ಸುಗಂಧ ಹರಡುತ್ತವೆ, ಸೌಂದರ್ಯ ತುಂಬುತ್ತವೆ. ಹೂಮರದತ್ತ ನಾವು ಸುಮ್ಮನೆ ನೋಡಿದರೆ ಸಾಕು ನಮಗೆ ಸಂತಸ ನೀಡುತ್ತದೆ. ಸಾರ್ಥಕ ಬದುಕೆಂದರೆ ಇದೆ ಅಲ್ಲವೆ?
ದಾರಿಯ ಬದಿಗೆ, ನಮ್ಮ ಸುತ್ತ ಮುತ್ತ ಬೆಳೆದಿರುವ ಹುಲ್ಲನ್ನು ಎಲ್ಲರೂ ತುಳಿಯುತ್ತಾರೆ. ಹಳಿಯುತ್ತಾರೆ. ಮತ್ತೆ ಕೆಲವರು ಹುಲ್ಲನ್ನು ಹರಿಯುತ್ತಾರೆ, ಕಿತ್ತಿ ಎಸೆಯುತ್ತಾರೆ. ಆದರೆ ಆ ಹುಲ್ಲಿಗೆ ನಿರಾಶೆ
ಎಂಬುದೇ ಇಲ್ಲ. ಮತ್ತೆ ಬೆಳೆಯುತ್ತಲೇ ಇರುತ್ತದೆ. ಯಾರು ತುಳಿದರು, ಹಳಿದರು ಎಂದು ಹುಲ್ಲು ಚಿಂತಿಸುವುದೇ ಇಲ್ಲ. ಒಂದು ದಿನ ಓರ್ವ ಸಂತರು ಹುಲ್ಲಿಗೆ ಕೇಳಿದರು “ಮನುಷ್ಯರು ನಿನ್ನನ್ನು ತುಳಿಯುತ್ತಾರೆ, ಹಳಿಯುತ್ತಾರೆ ಆದರೂ ನೀನು ಬೆಳೆಯುತ್ತಲೇ ಇರುತ್ತೀ ನಿನಗೆ ಬೇಸರವಾಗುವುದಿಲ್ಲವೆ?” ಹುಲ್ಲು ಹೇಳಿತು “ತುಳಿಯುವುದು ಮನುಷ್ಯರ ಸ್ವಭಾವ, ಬೆಳೆಯುವುದು ನಮ್ಮ ಸ್ವಭಾವ!” ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಯಾರೂ ಹುಲ್ಲಿನ ಬೀಜವನ್ನು ಬಿತ್ತುವುದಿಲ್ಲ ಆದರೆ ಹುಲ್ಲು ಇಲ್ಲದ ಜಾಗವೆ ಜಗದಲ್ಲಿ ಇಲ್ಲ. ಹುಲ್ಲಿನ ಪ್ರಯತ್ನಕ್ಕೆ ಪ್ರಸನ್ನತೆಗೆ
ಯಾರಾದರೂ ಮೆಚ್ಚಿಕೊಳ್ಳಲೇಬೇಕು.
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ