by 1 on | 2025-09-05 08:38:26
Share: Facebook | Twitter | Whatsapp | Linkedin | Visits: 128
*01,?ಮೇಷರಾಶಿ?*
?,ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು. ಅನ್ಯ ವಿಚಾರಗಳ ಕಡೆ ಗಮನ ಹರಿಸುವದು ಬೇಡ
*02,?ವೃಷಭರಾಶಿ?*
?,ಇಂದು ನಿಮಗೆ ಧನಾತ್ಮಕ ಫಲಿತಾಂಶಗಳು ಬರುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ ಏಕೆಂದರೆ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಉತ್ತಮ ಫಲಿತಾಂಶಗಳು ಬರಬಹುದು. ನಿಮ್ಮ ಒಡಹುಟ್ಟಿದವರಿಂದ ಸಹಾಯ ಪಡೆಯುವಿರಿ. ಇಂದು ಸೃಜನಾತ್ಮಕ ಕೆಲಸದ ಕಡೆಗೆ ನಿಮ್ಮ ಆಸಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳನ್ನು ಗೌರವಿಸಲಾಗುತ್ತದೆ,
*03,?ಮಿಥುನ ರಾಶಿ?*
?,ಇಂದು ನೀವು ಕೆಲಸದ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಕಾಣುತ್ತಿರ. ಕೆಲಸದ ಸ್ಥಳದಲ್ಲಿ ನೀವು ಯಾವುದೇ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು ಹಾಗು ನೀವು ಕೆಲವು ವಿಶೇಷ ವಿಷಯಗಳನ್ನು ತಿಳಿಯುತ್ತಿರ. ಕುಟುಂಬದ ಸದಸ್ಯರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ ಅದನ್ನು ಮಾಡಿ. ಅಧ್ಯಯನ ಮತ್ತು ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಕೊಳ್ಳಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ,
*04,?ಕಟಕ ರಾಶಿ?*
?,ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ. ನಿಮ್ಮ ಬಡ್ತಿಯ ಬಗ್ಗೆ ಶುಭ ಸಮಾಚಾರ ಕೇಳುವ ಅವಕಾಶಗಳು ಹೆಚ್ಚಿವೆ,
*05,?ಸಿಂಹ ರಾಶಿ?*
?,ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು. ಈ ದಿನ ನಿಮ್ಮ ಆಹಾರದ ಕಡೆ ಗಮನವಿರಲಿ,
*06,?ಕನ್ಯಾ ರಾಶಿ?*
?,ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಜಾಗ್ರತೆ,
*07,?ತುಲಾ ರಾಶಿ?*
?,ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು. ಈ ದಿನ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ,
*08,?ವೃಶ್ಚಿಕ ರಾಶಿ?*
?,ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು. ವ್ಯವಹಾರದಲ್ಲಿ ಪಾಲುದಾರರು ಹಾಗು ಸಹೋದ್ಯೋಗಿಗಳ ಕಡೆ ಗಮನವಿರಲಿ,
*09,?ಧನಸ್ಸು ರಾಶಿ?*
?,ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಕೆಲವು ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಮಿತ್ರರ ಸಹಾಯದಿಂದ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ ಮತ್ತು ನೀವು ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಲ್ಲಿ ನಿಮಗೆ ಇಂದು ವಿಶೇಷ ಲಾಭವಾಗುವುದು, ವ್ಯಾಪಾರ ಮಾಡುವ ಜನರು ಇತರ ಕೆಲವು ಜನರೊಂದಿಗೆ ಒಪ್ಪಂದಗಳನ್ನು ಮಾಡುವಾಗ ಜಾಗ್ರತೆ. ಹಣದ ಲಾಭದ ಪರಿಸ್ಥಿತಿಯು ಉತ್ತಮವಾಗಿ ಕಾಣುತ್ತಿದೆ, ಆದರೆ ಯಾರಿಗೂ ಸಾಲ ನೀಡುವುದು ಬೇಡ,
*10,?ಮಕರ ರಾಶಿ?*
?,ಇಂದು ನಿಮಗೆ ಸವಾಲಿನ ದಿನವಾಗಿದೆ, ಹಣಕಾಸಿ ವಿಚಾರವಾಗಿ ನಷ್ಟ ಆಗುವುದು. ಉದ್ಯೋಗ ಅರಸಿ ಅಲೆದಾಡುವ ಜನರಿಗೆ ಉತ್ತಮ ಅವಕಾಶ ಬರಬಹುದು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನೀವು ಅಧಿಕಾರಿಗಳ ಕಣ್ಮಣಿಯಾಗುತ್ತೀರಿ. ಇಂದು ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಹ ತಾಳ್ಮೆಯಿಂದಿರಬೇಕು, ಇಲ್ಲದಿದ್ದರೆ ನಡೆಯುವ ಸಮಸ್ಯೆಗೆ ನೀವು ಕಾರಣರಾಗಬೇಕಾಗಬಹುದು,
*11,?ಕುಂಭ ರಾಶಿ?*
?,ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ ಚಿಂತಿಸದಿರಿ. ಈ ದಿನ ನಿಮ್ಮ ಸ್ವ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ,
*12,?ಮೀನ ರಾಶಿ?*
?,ನಿಮಗೆ ಇಂದು ಮಿಶ್ರ ದಿನವಾಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಉದ್ಯೋಗವನ್ನು ಪಡೆಯಬಹುದು. ನಿಮ್ಮ ಶ್ರಮದ ಫಲವನ್ನು ನೀವು ಇಂದು ಪಡೆಯುತ್ತಿರ ಮತ್ತು ನೀವು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಇಂದು ನೀವು ಅದರಿಂದ ಮುಕ್ತರಾಗುತ್ತೀರಿ. ಈ ದಿನ ಯಾವುದೇ ಕೋರ್ಟು ಕಚೇರಿ ಕೆಲಸಗಳಿಗೆ ಹೋಗದಿರಿ ನಿಮಗೆ ದಕ್ಕಬೇಕಾದ ಫಲ ದಕ್ಕದೆ ಹೋಗಬಹುದು. ಈ ದಿನ ತಂದೆಯೊಂದಿಗೆ ಯಾವುದೇ ರೀತಿಯ ವಾದವನ್ನು ಮಾಡಬೇಡಿ,
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ