* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
BENGLORE Rajadhani

ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!

by 1 on | 2025-09-17 09:19:42

Share: Facebook | Twitter | Whatsapp | Linkedin | Visits: 146


ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಭೂಸ್ವಾಧೀನ ಪರಿಹಾರ ಘೋಷಣೆ


ಮುಳುಗಡೆಯಾಗಲಿರುವ ನೀರಾವರಿ ಜಮೀನು: ಪ್ರತಿ ಎಕರೆಗೆ ₹40 ಲಕ್ಷ, ಒಣಭೂಮಿ: ಪ್ರತಿ ಎಕರೆಗೆ ₹30 ಲಕ್ಷ


ಕಾಲುವೆ ನಿರ್ಮಾಣ: ನೀರಾವರಿ ಜಮೀನಿಗೆ 30 ಲಕ್ಷ: ಒಣಭೂಮಿಗೆ 25 ಲಕ್ಷ ಪರಿಹಾರ


ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಗೌರವಿಸಿ ಈ ಪರಿಹಾರವನ್ನು ನಿಗದಿ ಮಾಡಲಾಗಿದ್ದು, 3 ಆರ್ಥಿಕ ವರ್ಷಗಳಲ್ಲಿ ಪರಿಹಾರ ಪಾವತಿಸಲು ನಿರ್ಧರಿಸಲಾಗಿದೆ.


ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದ್ದು, ಹಿನ್ನೀರಿನಿಂದ ಸುಮಾರು 75000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಸುಮಾರು 14 ರಿಂದ 15 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಬಹುದಾಗಿದೆ.


ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರಸರ್ಕಾರವನ್ನು ಒತ್ತಾಯಿಸಲಾಗುವುದು.

Search
Most Popular

Leave a Comment