* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA KOLHAR

ಕೃಷ್ಣಾ ಮೇಲ್ದಂಡೆ ಯೋಜನೆ ನಿಗಧಿಮಾಡಿ ಫರಿಹಾರ ನೀಡಲು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಒತ್ತಾಯಿಸಿದ್ದಾರೆ.

by 1 on | 2025-09-14 08:34:08

Share: Facebook | Twitter | Whatsapp | Linkedin | Visits: 145


 ಕೃಷ್ಣಾ ಮೇಲ್ದಂಡೆ ಯೋಜನೆ ನಿಗಧಿಮಾಡಿ ಫರಿಹಾರ ನೀಡಲು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಒತ್ತಾಯಿಸಿದ್ದಾರೆ.

ಕೊಲ್ಹಾರ. ವಿಜಯಪುರ-ಬಾಗಲಕೋಟ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆ ಹಾಗೂ ಕಾಮಗಾರಿಗೆ ವಿಜಯಪುರ-ಬಾಗಲಕೋಟ ಜಿಲ್ಲೆಗಳ ಸುಮಾರು 1 ಲಕ್ಷ 30 ಸಾವಿರ ಎಕರೆ ಭೂಮಿಗೆ ಸಂತ್ರಸ್ತರ ಬೇಡಿಕೆಯಂತೆ 1 ಎಕರೆ ನೀರಾವರಿ ಭೂಮಿಗೆ 55 ಲಕ್ಷ ಒಣ ಬೇಸಾಯಿಗೆ |ಎಕರೆ ಜಮೀನಿಗೆ 45 ಲಕ್ಷ ರೂ. ಗಳಂತೆ ಬೆಲೆ ನಿಗಧಿಮಾಡಿ ಫರಿಹಾರ ನೀಡಲು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಒತ್ತಾಯಿಸಲಾಯಿತು.


ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ದಿನಾಂಕ 16-09-2025ರಂದು ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ 3ನೇ ಹಂತದಲ್ಲಿ ಮುಳಗಡೆಯ ವಿಶೇಷ ಸಂಪುಟ ಸಭೆ ಕರೆದಿದ್ದು ಆ ಸಭೆಯಲ್ಲಿ ಜಲಾಶಯಗಳಲ್ಲಿ ಮುಳಗಡೆಯಾಗಿರುವ ಮತ್ತು ಕಾಲುವೆಗಳಿಗಾಗಿ ಭೂ-ಸ್ವಾದೀನ ಮಾಡಿಕೊಂಡಿರುವ ಜಮಿನಗಳಿಗೆ ರೈತರ ಬೇಡಿಕೆಯೆಂತೆ 1 ಎಕರೆ ನೀರಾವರಿಗೆ 55 ಲಕ್ಷ ಒಣ ಬೇಸಾಯ 1 ಎಕರೆಗೆ 45 ಲಕ್ಷ ಬೆಲೆ ನಿಗಧಿಮಾಡಬೇಕು, ಆಲಮಟ್ಟಿ ಜಲಾಶಯದಲ್ಲಿ ಮುಳಗಡೆಯಾಗ ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ 1498 ಮನೆಗಳಿಗೆ ಮತ್ತು ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಮನೆಗಳಿಗೆ ಮಾತ್ರ 3 ಕಂಡಿಶನ್ ಮೂಲಕ ಪರಿಹಾರ ಧನ ನೀಡಲಾಗಿತ್ತು. ಟಕ್ಕಳಕಿ ಗ್ರಾಮಕ್ಕೆ ಹಾಕಿದ 3 ಕಂಡಿಶನ್ ಸಡಿಲಗೊಳಿಸಿ ಎಲ್ಲಾ ಸಂತ್ರಸ್ತರಂತೆ ಫರಿಹಾರ ನೀಡಲಾಗಿದೆ. ಆದರೆ ಕೊಲ್ದಾರ ಗ್ರಾಮದ 1498 ಮನೆಗಳಿಗೆ ಹಾಕಿದ 3 ಕಂಡಿಶನ್‌ಗಳ ಪೈಕಿ 2 ಕಂಡಿಶನ್ ತಗೆದು ಹಾಕಲಾಗಿದೆ. 3ನೇ ಕಂಡಿಶನ್ ಹೆಚ್ಚುವರಿ ಫರಿಹಾರಕೆ ನ್ಯಾಯಾಲಯಕ್ಕೆ ಹೋಗಬಾರದು ಎನ್ನುವ ಕರಾರು ಮಾತ್ರ ಬಾಕಿ ಇದೆ. ಕಾರಣ 1498 ಮನೆ ಮಾಲಿಕರಿಗೆ ಇಡೀ ಆಲಮಟ್ಟಿ ಯೋಜನೆಯಡಿಯಲ್ಲಿ ಕೊಲ್ದಾರ ಗ್ರಾಮಕ್ಕೆ ಮಾತ್ರ ಅನ್ಯಾಯವಾಗಿದ್ದು ಹೆಚ್ಚುವರಿ ಫರಿಹಾರ ನೀಡಿ ಸರಿಪಡಿಸಬೇಕು. ಭಾರತೀಯ ಜನತಾ ಪಾರ್ಟಿ ಹಾಗೂ ಸಂತ್ರಸ್ತರ ಜೊತೆ ಸೇರಿ ದಿನಾಂಕ: 14-09-2025ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಹತ್ತಿರ ಹುಬ್ಬಳ್ಳಿ-ವಿಜಯಪುರ-ಹುಮ್ನಾಬಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 12 ಘಂಟೆಗೆ ಸಾಂಕೇತಿಕವಾಗಿ ರಸ್ತೆ ತಡೆಹಿಡಿದು ಪ್ರತಿಭಟಿಸಲಾಗುವುದು. ದಿನಾಂಕ: 15-09-2025 ರಿಂದು ಹಾಗೂ 20-09-2025ರಂದು ಕೊಲ್ದಾರ ತಾಲೂಕಿನ ಕೊಲ್ದಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಬೆಳ್ಳಿಗ್ಗೆ 10-30 ರಿಂದ ಸಂಜೆ 5-30ರ ವರೆಗೆ ಸರದಿ ಉಪವಾಸ ಸತ್ಯಾಗ್ರ ಪ್ರಾರಂಭಿಸಲಾಗುವುದು. ಒಂದು ವೇಳೆ ಸರಕಾರ 16-09-2025ರಂದು ನಡೆಯುವ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೆ ದಿನಾಂಕ: 21-09-2025 ರಿಂದ ಅಮಾರಣ ಉಪವಾಸ ಸತ್ಯಾಗ್ರಹವನ್ನು ಬೇಡಿಕೆ ಇಡೇರುವರೆಗೆ ಮಾಡಲಾಗುವುದು ಎಂದು ಅವರು ಒತ್ತಾಯಿಸಿದರು.

Search
Most Popular

Leave a Comment