by 1 on | 2025-08-08 07:07:50
Share: Facebook | Twitter | Whatsapp | Linkedin | Visits: 96
*?ಶ್ರೀವಾಣಿ 8-8-2025?*
*ನಿಂದಂತು ನೀತಿ ನಿಪುಣಾಃ ಯದಿ ವಾ ಸ್ತುವಂತು| ಅದೈವ ಮರಣಮಸ್ತು ವಾ ಯುಗಾಂತರೇ। ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ ||*
ರೀತಿ ನೀತಿಗಳನ್ನು ಬಲ್ಲವರು, ನಿಂದಿಸಲಿ, ಸ್ತುತಿಸಲಿ, ಈಗಲೇ ಮರಣವು ಬರಲಿ ಅಥವಾ ಮುಂದೆ ಎಂದಾದರೂ ಬರಲಿ, ಧೀರರು ಜಾಣರು ನ್ಯಾಯಮಾರ್ಗದಿಂದ ಒಂದೇ ಒಂದು ಹೆಜ್ಜೆ ಹೊರಗೆ
ಹಾಕುವುದಿಲ್ಲ! ಬಡತನವೆ ಬರಲಿ, ಸಿರಿತನವೆ ಬರಲಿ, ಸ್ತುತಿ-ನಿಂದೆ ಏನೇ ಬರಲಿ ಮಹಾತ್ಮರಾದವರು ಹೂಮರದಂತೆ ಸುಗಂಧವನ್ನೆ ಕೊಡುತ್ತಾರೆ. ಹಸಿರು ಹುಲ್ಲಿನಂತೆ ಕಣ್ಮನಗಳಿಗೆ ತಂಪನ್ನು ಶಾಂತಿಯನ್ನು ಕೊಡುತ್ತಾರೆ.
ಮಹಾರಾಜನಾಗಿದ್ದ ಗೌತಮ ಬುದ್ಧನು ಒಮ್ಮಿಂದೊಮ್ಮೆಲೆ ಎಲ್ಲವನ್ನು ತೊರೆದು ಸನ್ಯಾಸಿಯಾದ. ಸಕಲ ಭೋಗ ಭಾಗ್ಯದಲ್ಲಿದ್ದ
ಬುದ್ದನು ಅದನೆಲ್ಲ ಕಾಲಕಸದಂತೆ ದೂರ ಸರಿಸಿದ. ಜೀವನದಲ್ಲಿ ಇರುವ ದುಃಖ ದುಮ್ಮಾನಗಳಿಗೆ, ಸಾವು ನೋವುಗಳಿಗೆ, ರೋಗ ರುಜಿನಗಳಿಗೆ ಕಾರಣವನ್ನು ಕಂಡುಹಿಡಿಯಲು ಪರಮಸತ್ಯದ
ಶೋಧನೆಗಾಗಿ, ಅರಮನೆ, ಅರಸೊತ್ತಿಗೆ ಹಿಂದಿಟ್ಟು ಮುನ್ನಡೆದ; ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದ. ಚಿನ್ನದ ಪಾತ್ರೆ ಹಿಡಿದ ಕೈಗಳಿಂದ ಭಿಕ್ಷಾಪಾತ್ರೆ ಹಿಡಿಯುವುದಕ್ಕೆ ಅದೆಂಥ ಧೈರ್ಯ ಆ ಮಹಾರಾಜನಿಗೆ
ವೀರವೈರಾಗ್ಯವೆಂದರೆ ಇದೇ ಅಲ್ಲವೆ? ಮಹಾರಾಜನು ಭಿಕ್ಷೆಗೆ ಬಂದುದನ್ನು ನೋಡಿ ಹೊಗಳಿದವರಿಗಿಂತ ತೆಗಳಿದವರೇ ಹೆಚ್ಚು.
ಎಂಥಾ ದುರ್ದೈವ ಇರಬೇಕು ಈ ಮಹಾರಾಜನಿಗೆ, ಸತಿ-ಸುತರು, ಸೇವಕರು, ಅಂಗರಕ್ಷಕರು, ಮಂತ್ರಿಮಹೋದಯರು, ನೆಚ್ಚಿನ ಪ್ರಜೆಗಳು, ಸಿರಿ ಸಂಪದ ಏನೆಲ್ಲವೂ ಇರುವಾಗ ಈ ರೀತಿ ಭಿಕ್ಷೆ ಬೇಡುವುದು
ಸರಿಯೆ? ನಂಬಿದವರನೆಲ್ಲ ನಡುನೀರಲ್ಲೇ ಕೈ ಬಿಟ್ಟು ಬರುವುದು ನ್ಯಾಯವೇ, ಧರ್ಮವೇ ಎಂದು ಜನ ಮನಸ್ಸಿಗೆ ಬಂದಂತೆ ನಿಂದಿಸಿದವರಿಗೆ ಲೆಕ್ಕವೇ ಇಲ್ಲ. ಭಿಕ್ಷೆ ನೀಡುವುದಂತೂ ದೂರೇ ಉಳಿಯಿತು. ಆದಾಗ್ಯೂ ಬುದ್ಧ ಭಗವಾನರ ಮುಖದ ಮೇಲಿನ ಕಳೆ, ಪ್ರಸನ್ನತೆ, ಪ್ರಶಾಂತಿ ತಿಲಮಾತ್ರವೂ ಕಡಿಮೆಯಾಗಲಿಲ್ಲ. “ಭವತಿ
ಭಿಕ್ಷಾಂದೇಹಿ"“ಬುದ್ಧಂ ಶರಣಂ ಗಚ್ಚಾಮಿ” ಎಂದು ನಗುನಗುತ್ತಲೇ ಬುದ್ಧ ಭಗವಾನರು ಮುಂದೆ ಮುಂದೆ ಸಾಗುವುದನ್ನು ನೋಡಿದವರಿಗೆ ಪರಮಾಶ್ಚರ್ಯ! ಜಗದ ದುಃಖವನ್ನೇ ಕಳೆಯಲು ಪಣತೊಟ್ಟ ಆ
ಮಹಾಯೋಗಿಗೆ ಯುಗ ಯುಗಕ್ಕೂ ಜಗವೇ ತಲೆ ಬಾಗಲಿದೆ ಎಂಬುದು ಅಜ್ಞ ಜನರಿಗೇನು ಗೊತ್ತು?
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ