* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
???? ???? ???? ????

ಶ್ರೀ ವಾಣಿ

by 1 on | 2025-08-11 09:38:47

Share: Facebook | Twitter | Whatsapp | Linkedin | Visits: 122


ಶ್ರೀ ವಾಣಿ

ಈ ಜಗತ್ತು ಚಲನಶೀಲ. ಜಗತ್‌ ಈ ಶಬ್ದದ ಅರ್ಥವೇ ಚಲನೆ ಎಂದಾಗುತ್ತದೆ. *“ಜಂ ಗಚ್ಛತಿ ಇತಿ ಜಗತ್"* ಎಂದು ಜಗತ್‌

ಶಬ್ದದ ವಿಶ್ಲೇಷಣ ವ್ಯಾಖ್ಯಾನವಾಗಿದೆ. ನಮ್ಮ ಸುತ್ತಮುತ್ತ ಇರುವ ಜಗತ್ತಿನಲ್ಲಿ ಯಾವುದೂ ಸ್ಥಿರವಾಗಿಲ್ಲ. ಸೂರ್ಯ, ಚಂದ್ರ, ಭೂಮಿ

ಕೋಟ್ಯಂತರ ನಕ್ಷತ್ರಗಳಿಂದ ಕೂಡಿದ ಅದ್ಭುತ ವಿಶ್ವವೆಲ್ಲವೂ ಚಲಿಸುತ್ತದೆ. ಇದು ನಮ್ಮ ಋಷಿಮುನಿಗಳು ಮಾಡಿದ ಅದ್ಭುತ ಸಂಶೋಧನೆ.ಆದರೆ ನಾವು ಈ ಜಗತ್ತು ನಮ್ಮ ಜೀವನ, ಸಿರಿ, ಸಂಪದ ಎಲ್ಲವೂ ಸ್ಥಿರವೆಂದು ಭಾವಿಸಿದ್ದೇವೆ. ಇದು ನಮ್ಮ ಭ್ರಮಾತ್ಮಕ ಕಲ್ಪನೆ ವಿನ ಸತ್ಯವಲ್ಲ. ಆದುದರಿಂದ ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲವೆಂದು

ಅರಿತು, ನೆಮ್ಮದಿಯಿಂದ ಬಾಳುವುದೇ ಆಧ್ಯಾತ್ಮಿಕ ಆದರ್ಶ ಜೀವನ.


ಈ ಜಗತ್ತಿನಲ್ಲಿರುವ ಚಲನೆಯನ್ನು ಮುಖ್ಯವಾಗಿ ಎರಡು ಪ್ರಕಾರದಲ್ಲಿ ವಿಂಗಡಿಸಬಹುದು. ೧) ದೇಶಿಕ ಚಲನೆ ೨) ಕಾಲಿಕ ಚಲನೆ. ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

ದೇಶಿಕ ಚಲನೆ. ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಹೋಗುವುದು

ಕಾಲಿಕ ಚಲನೆ. ವಸ್ತುಗಳು ಎಷ್ಟೇ ಸ್ಥೂಲವಿರಲಿ , ಸೂಕ್ಷ್ಮವಿರಲಿ ಎಲ್ಲವೂ

ಚಲಿಸುತ್ತವೆ. ಈ ಜಗತ್ತಿನಲ್ಲಿ ಚಲಿಸದೇ ಇರುವ ಒಂದೇ ಒಂದು ವಸ್ತುವಿಲ್ಲ. ಯಾವುದೇ ವಸ್ತುವಿರಲಿ ಅದು ಇಂದಿನಂತೆ ನಾಳೆ ಇರುವುದಿಲ್ಲ.ಹೀಗೆ ಜಗತ್ತಿನಲ್ಲಿ ಎಲ್ಲವೂ ಚಲಿಸುವಾಗ ಈ ಜಗತ್ತಿನ ಭಾಗವಾಗಿರುವ

ನಾವು ಚಲಿಸದೇ ಹಾಗೇ ಇರಲು ಹೇಗೆ ಬರುತ್ತದೆ.


ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ

Search
Most Popular

Leave a Comment