* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA Indi

ದಂತಗಳ ಕಾಳಜಿ ಅವಶ್ಯಕ ಡಾ|| ಪರಮಾನಂದ ಬಿರಾದಾರ ಇಂಡಿ.

by 1 on | 2025-08-18 13:46:26

Share: Facebook | Twitter | Whatsapp | Linkedin | Visits: 111


ದಂತಗಳ ಕಾಳಜಿ ಅವಶ್ಯಕ ಡಾ|| ಪರಮಾನಂದ ಬಿರಾದಾರ   ಇಂಡಿ.

ಮನುಷ್ಯನಿಗೆ ಹಲ್ಲುಗಳು ಅತೀ ಮಹತ್ವದ ಅಂಗ. ಅಹಾರ ಚೆನ್ನಾಗಿ ನುರಿಸಲು ದಂತಗಳ ಕಾರ್ಯ ಮಹತ್ವದ್ದು ಹೀಗಾಗಿ ನಾವು ದಂತಗಳ ಕಾಳಜಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಡಾ|| ಪರಮಾನಂದ ಬಿರಾದಾರ ಹೇಳಿದರು.

ಪಟ್ಟಣದ ನಿಲೇಶ ಇವಣಿ ಇವರ ಆಸ್ಪತ್ರೆಯಲ್ಲಿ ಸ್ವಾತಂತ್ಯೊöತ್ಸವ ನಿಮಿತ್ಯ ನಡೆದ ಉಚಿತ ದಂತ ಚಿಕಿತ್ಸೆ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಮನುಷ್ಯನಿಗೆ ಎಲ್ಲ ಅಂಗಾAಗಗಳAತೆ ಹಲ್ಲು ಕೂಡ ಅಷ್ಟೇ ಮುಖ್ಯ. ಎಲ್ಲ ಅಂಗಗಳಿಗೆ ಮಹತ್ವ ನೀಡಿದಂತೆ ಹಲ್ಲಿಗೂ ಮಹತ್ವ ನೀಡಿ ಅದರ ಆರೈಕೆ ಆರೋಗ್ಯಕ್ಕೆ ಉತ್ತಮ ಎಂದರು.

ವೈದ್ಯ ನಿಲೇಶ ಇವಣಿ ಮಾತನಾಡಿ ದಂತುಗಳಿಗೆ ಅಲ್ಜೆನರ್ಸ,ಸೆರಾಮಿಕ ತಂತಿ,ಹಲ್ಲು ಸ್ವಚ್ಛ ಗೊಳಿಸುವದು, ಡಿಜಿಟಲ್ ಎಕ್ಸರೇ, ರೂಟ್ ಕೆನಲ್ ಚಿಕಿತ್ಸೆ, ಚಿಕ್ಕ ಮಕ್ಕಳ ಹಲ್ಲಿನ ಚಿಕಿತ್ಸೆ, ಹಲ್ಲು ಕೀಳುವರು, ಅಕಲ್ ಹಲ್ಲು ಕೀಳುವದು,ಹಲ್ಲು ಸ್ವಚ್ಛ ಗೊಳಿಸುವದು,ಹಲ್ಲಿನ ಸೆಟ್, ನಗುವಿನ ವಿನ್ಯಾಸ,ಕ್ಯಾಪ ಮತ್ತು ಬ್ರಿಡ್ಜ ಫಿಕ್ಸೆಡ್ ಹಲ್ಲಿನ ಸೆಟ್ ಮುಂತಾದ ಕಾಳಜಿಗಳಗೆ ದಂತ ವೈದ್ಯರನ್ನು ಭೇಟಿ ನೀಡಿ ಆರೈಕೆ ತೆಗೆದುಕೊಳ್ಳುವದು ಉತ್ತಮ.

ಡಾ|| ಲಕ್ಷಿಕಾಂತ್ ಮೇತ್ರಿ, ಚಂದ್ರಶೇಖರ ಇವಣಿ, ಮಹೇಶ ಝಂಪಾ, ಉಮೇಶ ಬಳಬಟ್ಟಿ, ಡಾ|| ವಿಪುಲ್ ಕೋಳೆಕರ ಮತ್ತಿತರರು ಉಪಸ್ಥಿತರಿದ್ದರು. ಸುಮಾರು ೩೦೦ ಕ್ಕೂ ಹೆಚ್ಚು ಜನರು ಉಚಿತ ದಂತ ಚಿಕಿತ್ಸೆ ಲಾಭ ಪಡೆದರು.

Search
Most Popular

Leave a Comment